MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶನಿವಾರ, ಜನವರಿ 27, 2018

ಎರಡು ವಿಧದ ವಿಶ್ವದ ಜನ - ಎ .ಟಿ. ನಾಗರಾಜ

ಎರಡು ವಿಧದ ವಿಶ್ವದ ಜನ - ಎ .ಟಿ. ನಾಗರಾಜ 

ನಾವು ನಮ್ಮನ್ನು ಬಿಟ್ಟು ಬೇರೆ ಎಲ್ಲರನ್ನು ಗಮನವಿಟ್ಟು ಗಮನಿಸುವವರು.  ಹಾಗಾಗಿಯೇ ವಿಶ್ವದ ತೊಂಭತ್ತೈದು ಭಾಗದ ಜನ ಸಂಸಾರಿಗಳಾಗಿದ್ದು, ಉಳಿದ ಕೇವಲ ಐದು ಭಾಗದ ಜನ ವಿಶ್ವದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದು. 

ತೊಂಭತ್ತೈದು ಭಾಗದ ಜನ ತಮ್ಮ ಹೆಂಡತಿ, ಮಕ್ಕಳು, ಸಂಸಾರ ಹೀಗೆ ಇದರ ಬೆನ್ನ ಹತ್ತಿ ,  ಯಾಕಪ್ಪ ಈ ಸಂಸಾರ! ಈ ಹೆಂಡತಿ, ಮಕ್ಕಳು, ಎಂದು ಜೀವನ ಸಾಗಿಸುವವರು. 

ಇನ್ನು ಐದು ಭಾಗದ ಜನ ವಿಧ್ಯೆ,ವ್ಯವಹಾರ, ರಾಜಕೀಯ, ತಂದೆ ,ತಾಯಿ, ಸಮಾಜ,  ಈ ರೀತಿ ವಿಶ್ವದಲ್ಲಿ ಕುಣಿದು ನಲಿದವರು. 

ಈ ತೊಂಭತ್ತೈದು ಭಾಗದ ಜನರಿಗೆ ತಂದೆ, ತಾಯಿ, ಸಮಾಜ ಬೇಡ, ತಾವು ತಮ್ಮ ಹೆಂಡತಿ ,ಮಕ್ಕಳು ಚೆನ್ನಾಗಿರಬೇಕು.. 

ಈ ಐದು ಭಾಗದ ಜನರಿಗೆ ತಂದೆ ,ತಾಯಿ, ಸಮಾಜ ಚೆನ್ನಾಗಿರಬೇಕು. 

ತೋಭತ್ತೈದು ಭಾಗದ ಜನರಿಗೆ ಬೆಳಿಗ್ಗೆ  ಬೇಗ ಏಳುವುದು, ಜಾಸ್ತಿ ಕೆಲಸ ಮಾಡುವುದು. ಬೇರೆಯವರಿಗೆ ಸಹಾಯ ಮಾಡುವುದು ಅಲರ್ಜಿ. 

ಐದು ಭಾಗದ ಜನರಿಗೆ ಬೆಳಿಗ್ಗೆ ಬೇಗ ಏಳುವುದು, ಜಾಸ್ತಿ ಕೆಲಸ ಮಾಡುವುದು ,ಬೇರೆಯವರಿಗೆ ಸಹಾಯ ಮಾಡುವುದು ತುಂಭಾ ಇಷ್ಟ . 

ನೀವೇ ಯೋಚಿಸಿ.  ನೀವು ಯಾವ ವರ್ಗದ ಜನ. 




ಭಾನುವಾರ, ಜೂನ್ 11, 2017

ನಮ್ಮಲ್ಲಿ ಕೆಲವರು ತಮ್ಮ ತಪ್ಪನ್ನು ಒಪ್ಪಿ ಕೊಳ್ಳದವರು ಬೇರೆಯವರ ಮೇಲೆ ಗೂಬೆ ಕೂರಿಸುವವರು ಇದ್ದಾರೆ. ಆದರೆ ಅವರು ತಿಳಿದಿರಬಹುದು ತಾವು ಬುದ್ಧಿವಂತರೆಂದು. ಆದರೆ, ಅದು ಒಂದು ಮೂರ್ಖತನದ ಬುನಾದಿ. ಯಾಕೆಂದರೆ,ಯಾವುದೇ ವ್ಯಕ್ತಿ ತನ್ನ ತಪ್ಪನ್ನು ತಾನು ಒಪ್ಪಿಕೊಂಡು ಮುಂದೆ ಹೋಗಬೇಕೆ ಹೊರತು ಬೇರೆಯವರ ಮೇಲೆ ಕೈ ತೋರಿಸಿ ಮುಂದೆ ಹೋಗಬಾರದು. ಅದು ಜೀವನದಲ್ಲಿ ಮುಂದೆ ಬರಲು ಮಾರಕವೇ ಹೊರತು ಪೂರಕವಲ್ಲ.

ಇತ್ತೀಚಿಗೆ ಒಂದು ಘಟನೆ ನಡೆಯಿತು. ಒಂದು ಐ,ಎಸ್..ಓ .ಕಂಪನಿಗೆ ಒಬ್ಬ ಮೇಲ್ವಿಚಾರಕ ಬಂದಿದ್ದರು. ಅದೇ ವೇಳೆಗೆ ಆ ಕಂಪನಿಯಲ್ಲಿ ಕೆಲಸಮಾಡುವ ಸಿಬ್ಬಂಧಿಯೊಬ್ಬನಿಗೆ ಬೇರೆ ಬ್ರಾಂಚ್ ನಿಂದ ಕರೆಬಂತು. ಕರೆ ಸ್ವೀಕರಿಸಿ ಮಾತನಾಡಿದ. ಆ ಕರೆಮಾಡಿದ ವ್ಯಕ್ತಿ ಲಿಫ್ಟ್ನಲ್ಲಿ ಸ್ಟ್ರಕ್ ಆಗಿದ್ದಾಗಿಯೂ ಆತನನ್ನು ಲಿಫ್ಟ್ನಿಂದ ಬಿಡಿಸಬೇಕಾಗಿಯೂ ಆ ವ್ಯಕ್ತಿ ಹೇಳಿದ್ದ. ಆತನ ಪಕ್ಕದಲ್ಲಿ ಇದ್ದ ಮೇಲ್ವಿಚಾರಕ ಎಲ್ಲವನ್ನು ಕೇಳಿಸಿಕೊಂಡಿದ್ದ .

ಎಲ್ಲ ಕೇಳಿಸಿಕೊಂಡ ಮೇಲೆ ಮೇಲ್ವಿಚಾರಕ ಕೇಳಿದ. ಲಿಫ್ಟ್ ಸ್ಟ್ರಕ್ ಯಾಕೆ ಆಯ್ತು.?

ಲಿಫ್ಟ್ನಲ್ಲಿ ಜಾಸ್ತಿ ಜನ ಇದ್ದುದ್ದರಿಂದ ,

ಯಾವ ಫ್ಲೋರಿನಲ್ಲಿ ?

ನಾಲ್ಕನೇ ಫ್ಲೋರಿನಲ್ಲಿ .

ಲಿಫ್ಟ್ ಕೆಪ್ಯಾಸಿಟಿಗಿಂತ ಜಾಸ್ತಿಜನ ಲಿಫ್ಟ್ನಲ್ಲಿ ಹೋದರೆ ಲಿಫ್ಟ್ ಚಲಿಸುವುದಿಲ್ಲ. ನಾನು ಈ ವಿಷಯದಲ್ಲಿ ಪಿ.ಹೆಚ್ .ಡಿ,ಮಾಡುವುದು ಒಂದು ಬಾಕಿ ಇದೆ. ನಿನ್ನ ರೀತಿಯವರನ್ನು ಬಹಳ ಜನ ರನ್ನು ಕಂಡಿದ್ದೇನೆ. ಎಂದಾಗ ಆ ಅಧಿಕಾರಿಯ ಮುಖ ಸಪ್ಪಗೆ ಆಯ್ತು. 

ಶುಕ್ರವಾರ, ಅಕ್ಟೋಬರ್ 5, 2012

ಎಲ್ಲರೂ ಮಹಾತ್ಮಾ ರಾಗದಿರಲೂ ಕಾರಣವೇನು ?

ಎಲ್ಲರೂ ಮಹಾತ್ಮಾ  ರಾಗದಿರಲೂ ಕಾರಣವೇನು ?
ನಾನು ಬಹಳ ದಿನದಿಂದಲೂ ಬಹಳ  ಯೋಚಿಸುತ್ತಿದ್ದೆ ,  ನಾವು ಶಾಲಾ - ಕಾಲೇಜು ಗಳಲ್ಲಿ ದೊಡ್ಡ ದೊಡ್ಡ ಸಭೆ ಸಮಾರಂಭ ಗಳಲ್ಲಿ ಮಹಾತ್ಮರ ಬಗ್ಗೆ , ಅವರ ಜೇವನ ಕ್ರಮದ ಬಗ್ಗೆ , ಅವರು ನಡೆದು ಬಂದ ದಾರಿಯ ಬಗ್ಗೆ  , ಅವರ ಪ್ರಾಮಾಣಿಕತೆಯ ಬಗ್ಗೆ ಹೇಳುತ್ತೇವೆ ,  ಆದರೆ ಹೆಚ್ಚಿನ ಜನರು ಮಹಾತ್ಮ ರಾಗದಿರಲೂ ಮುಖ್ಯ ಕಾರಣ ಅದರಲ್ಲೂ ನೈಜ ಕಾರಣ ನನಗೆ ಹೊಳೆದಿದೆ .  "ಹಲಾವಾರು ಮಹಾತ್ಮರು (ಹುತಾತ್ಮರು ) ಸಜೀವ ದಹನಕ್ಕೆ ಒಳಗಾದವರೆ !",

    ರಾಷ್ಟ್ರಪಿತ ಮಹಾತ್ಮ ಗಾಂಧೀ ನಾತ ರಾಮ್ ಗೂಡ್ಸ್ ರವರ ಗುಂಡಿಗೆ ಬಲಿಯಾದರು !,  ಇಂದಿರಾ  ಗಾಂಧೀ ಮಾನವ ಹತ್ಯೆ ಬಾಂಬ್ಗೆ ಬಲಿಯಾದರು .  ರಾಜೀವ ಗಾಂಧೀ ಅವರು ಮಾನವ ಹತ್ಯೆ ಬಾಂಬ್ ಗೆ ಬಲಿಯಾದರು !,   ಈ ಎಲ್ಲಾ ಕಾರಣ ಗಳ ಹಿಂದೆ ಶಾಂತಿ ವಾದ ಅಡಗಿದೆ .


ಹಾಗೆಯೇ ಮಾನ್ಯ ಯಡಿಯೂರಪ್ಪ ಒಂದೆಡೆ ಹೇಳಿದ್ದಾರೆ "ಆಕ್ರಮಣ ಮಾಡುವುದು ಗೊತ್ತು .  ಆಪತ್ತಿನಿಂದ ಪಾರಾಗುವುದು ಗೊತ್ತು "!.  ಅಂದರೆ ಇದೆಲ್ಲ ಒಬ್ಬ ಇಂದೋ , ನಿನ್ನೆಯೋ ಹುಟ್ಟಿದ , ಲೋಕ ಪರಿಜ್ಞಾನ ವಿಲ್ಲದ ವ್ಯಕ್ತಿಗಳು ಹೇಳಿದ್ದರೆ ನಾವು ಅನುಮಾನ ಪಡಬಹುದು ,  ಆದರೆ ಇವರ ಜೀವಮಾನ ವಿಡಿ ಸಮಾಜ ಸೇವೆಗಾಗಿಯೇ ಸವೆದವರು. 
        ಅಂದರೆ ಇದಕ್ಕೆಲ್ಲ ಪರಿಹಾರ ವೇನು  ? ಎಲ್ಲಿಂದ ಪ್ರಾರಂಭ ವಾಗಬೇಕು ? ಪರಿವರ್ತನೆ ? . ಇದಕ್ಕೆ ನಮ್ಮ ನಿಮ್ಮೆಲ್ಲರ ನೆಚ್ಚಿನ ಮದರ್ ತೆರೇಸಾ ಸ್ಪಷ್ಟವಾಗಿ ಹೇಳಿದ್ದಾರೆ ." ಅವರವರ ಮನೆ ಮುಂದೆ ಸ್ವಚ್ಹ ಮಾಡಿಕೊಂಡರೆ ಇಡಿ ವಿಶ್ವವೇ ಸ್ವಚ್ಹ ವಾಗುತ್ತದೆ ".
      ಅಂದರೆ ಇದರ ಅರ್ಥ ನಮಗೆ ನಾವು ಪ್ರಾಮಾಣಿಕರಾಗಿ ಇರಬೇಕು ಎಂದರ್ಥ ವಲ್ಲವೇ !
ಆತ್ಮಿಯರೇ ಈ ಲೇಖನಕ್ಕೆ ಸಂಭದಪಟ್ಟ ನಿಮ್ಮ ಅಭಿಪ್ರಾಯ ,ಅನಿಸಿಕೆ ,ಟೀಕೆ ,ಟಿಪ್ಪಣಿ  ನಮಗೆ ಬರೆದು ಕಳುಹಿಸಿ .

ಪ್ರೀತಿ ಹಾಗೂ ವಿಶ್ವಾಸಗಳೊಂದಿಗೆ 

ನಿಮ್ಮೊಂದಿಗೆ ನಿಮ್ಮ ನೆಟ್ ನಾಗ 

ಮಂಗಳವಾರ, ಏಪ್ರಿಲ್ 26, 2011

ನೆಟ್ ನಾಗದಲ್ಲಿ ವಿಧ್ಯಾರ್ಥಿಗಾಗಿ ವಿಷಯದ ವಿಡಿಯೋ ಇಂದಿಗೆ ಮುಗಿಯುತ್ತಿದೆ.

ನೆಟ್ ನಾಗದಲ್ಲಿ ವಿಧ್ಯಾರ್ಥಿಗಾಗಿ ವಿಷಯದ ವಿಡಿಯೋ ಇಂದಿಗೆ ಮುಗಿಯುತ್ತಿದೆ.

  ಇದು ಬಹಳ ದಿನದ ಆಸೆ .  ನೆಟ್ ನಾಗದಲ್ಲಿ ಕನ್ನಡ ವಿಧ್ಯಾರ್ಥಿಗಳಿಗಾಗಿ ಹಾಗೂ ಯುವಕರಿಗಾಗಿ ಉಪಯುಕ್ತವಾಗುವ ಕನ್ನಡ ಲೇಖನಗಳನ್ನು ಹಾಗೂ ವಿಡಿಯೋ ಗಳನ್ನೂ ಕನ್ನಡದಲ್ಲಿ ತರಬೇಕು ಎಂಬ ಒಂದು ದೊಡ್ಡ ಆಸೆ ಇತ್ತು.  ಈಗಾಗಲೇ ನಿಮ್ಮ ಎದುರಿಗೆ ,  ನಿಮ್ಮ ಬಿಡುವಿನ ವೇಳೆಯಲ್ಲಿ ನೋಡುವಷ್ಟು ಸುಲಭವಾಗಿ ಪ್ರಕಟಗೊಂಡಿದೆ.  ನಿಮ್ಮ ಅನಿಸಿಕೆ,  ಅಭಿಪ್ರಾಯ, ನಿಮ್ಮ ಸಲಹೆ ಸೂಚನೆಗಳೇನಾದರೂ ಇದ್ದರೆsunnaturalflash@gmail.com   ಗೆ ಬರೆಯಿರಿ.  

   ಕೆಲವು ಸ್ನೇಹಿತರು you  are  network  marketer ? ಎಂದು ನನ್ನನ್ನು ಕೇಳಿದ್ದಾರೆ.  ವಿಷಯ ಇಷ್ಟೇ.  ನೆಟ್ವರ್ಕ್ ಮಾರ್ ಕೆಟರ್ ಗೂ ವಿದ್ಯಾರ್ಥಿಗಾಗಿ ಲೇಖನಗಳಿಗೂ ,  ವಿಡಿಯೋಗಳಿಗೂ ಗೋಕುಲ ಅಷ್ಟಮಿಗೂ ಮುಸ್ತಪ ಸಾಹೇಬರಿಗೂ ಯಾವ ರೀತಿಯ ಒಂದಕ್ಕೊಂದು ಸಂಬಂದವಿಲ್ಲವೋ ಆ ರೀತಿ.   ಆದರೆ ಒಬ್ಬ ನೆಟ್ ವರ್ಕ್ ಮಾರ್ ಕೆಟರ್ ತನ್ನನ್ನು ಬೆಳೆಸಿದ ಸಮಾಜಕ್ಕೆ ಸಹಾಯಕಾರಿ ಯಾಗುವ ಏನಾದರೊಂದು ಕೊಡುಗೆಯನ್ನು ಕೊಡಲೇ ಬೇಕೆಂಬ ಒಂದು ನಿಯಮ ಇದೆ.  ಹಾಗಾಗಿಯೇ ಪ್ರಪಂಚದ ಯಾವುದೇ ವ್ಯವಹಾರಸ್ಥ ಒಂದು ಸಮಾಜದಿಂದ ಎಷ್ಟು ತೆಗೆದುಕೊಂಡಿದ್ದಾನೋ ಅಷ್ಟೇ ಪ್ರಮಾಣದಲ್ಲಿ ,  ಸ್ವಲ್ಪ ಜಾಸ್ತಿ ಆಗಬಹುದು ಅಥವಾ ಕಡಿಮೆ ಆಗಬಹುದು ಹಿಂದಿರುಗಿಸಿಯೇ ಹಿಂದಿರುಗಿಸುತ್ತಾನೆ.  
ಒಂದು ಹಳೆಯ ಕನ್ನಡ ಗೀತೆ.  ನಿಮ್ಮ ಹಣಖಾಸಿನ ಸಮಸ್ಯೆಗೆ ಸುಲಭ ಹಾಗೂ ಸರಳ ಪರಿಹಾರ ಒದಗಿಸುತ್ತದೆ ಸನ್ ನ್ಯಾಚುರಲ್ ಪ್ಲಾಸ್ ಹಾಗಾಗಿ ನಾವು ಕಳುಹಿಸುವ ಹಾಗೂ ಕಳುಹಿಸಿದ ಲಿಂಕ್ ತಿರಸ್ಕ್ರುತವಾಗಿ ನೋಡಬೇಡಿ.  ಅದು ಬಲು ಕಷ್ಟಪಟ್ಟು ಬಡತನದಿಂದ ದುಡಿದು ಹೇಗೆ ಮೇಲೆ ಬಂದರು .  ಶ್ರೀಮಂತರಾದರು ಎನ್ನುವ ಬಗ್ಗೆ ,  ಶ್ರೀಮಂತರಾದವರೇ ಹೇಳುವ ನೈಜ ಚಿತ್ರಣ.  ಇದುವರೆವಿಗೂ ನನಗೆ ಗೊತ್ತಿದ್ದಂತೆ ಈ ರೀತಿ ವಿಚಿತ್ರವಾಗಿ ನೇರ ಮಾರುಕಟ್ಟೆಯನ್ನು ಕನ್ನಡಕ್ಕೆ ತಂದವರು ನನಗೆ ಯಾರೂ ಗೊತ್ತಿಲ್ಲ.  ನಿಮಗೆ ಗೊತ್ತಿದ್ದರೆ ನನಗೆ ತಿಳಿಸಿ.  ನೀವೂ ಇಲ್ಲಿಯ ಯಾವುದೇ ಇ-ಪುಸ್ತಕ ಖರೀಧಿಮಾಡಿದರೆ ನೀವು ದೊಡ್ಡ ವ್ಯಕ್ತಿ ಆಗುತ್ತೀರಿ ಎನ್ನುವ ಭರವಸೆ ನಾವು ಕೊಡುವುದಿಲ್ಲ.  ನೀವು ಏನೂ ಇ ಪುಸ್ತಕ ತೆಗೆದುಕೊಂಡಿರುತ್ತೀರೋ ಅದನ್ನು ಜೀವನದಲ್ಲಿ ಮುಂದೆ ಬರುತ್ತೇನೆ ಎನ್ನುವವರಿಗೆ ತಲುಪಿಸುವಂತೆ ಮಾಡಿದರೆ ನಿಮ್ಮ ಕೆಲಸ ಸಾರ್ಥಕ .
ಪ್ರೀತಿ ಪೂರ್ವಕ ವಂದನೆಗಳು ನಿಮ್ಮ ಕಡೆಗೆ ನಮ್ಮ ಕಡೆಯಿಂದ ಹರಿದು ಹೋಗಲಿ 

ಎ.ಟಿ.ನಾಗರಾಜ 







ಸೋಮವಾರ, ಏಪ್ರಿಲ್ 25, 2011

ಓದಿಗಿಂತ ಅನುಭವ ದೊಡ್ಡದು !

ಓದಿಗಿಂತ ಅನುಭವ ದೊಡ್ಡದು !.  ಇತ್ತೀಚಿಗೆ ನಾನು ಒಬ್ಬ ದೊಡ್ಡ ಉದ್ದಿಮೆ ದಾರರೋಬ್ಬರನ್ನು ಭೇಟಿ ಆದೆ.  ಸುಮಾರು ಒಂದೂವರೆ ಸಾವಿರ ಕೆಲಸಗಾರರನ್ನು ಹೊಂದಿರುವ ದೊಡ್ಡ ಕಂಪನಿಯ ಯಜಮಾನ ಅವರು.  ನಾವು ಪರಸ್ಪರ ಉಭಯ ಕುಶಲೋಪರಿಯನ್ನು ವಿಚಾರಿಸಿದ ಬಳಿಕ ಅವರ ಕಂಪನಿಯ ಬಗ್ಗೆ ಮಾತು ಪ್ರಾರಂಭಿಸಿದರು.  ಅವರು ತಮ್ಮ ಬಡತನದಲ್ಲಿ ಸಾಮಾನ್ಯ ಒಬ್ಬ ಸೆಕ್ಯುರಿಟಿ ಗಾರ್ಡ್ ಆಗಿ ದಿನದಲ್ಲಿ ಹನ್ನೆರಡು ಗಂಟೆ,  ಇಪ್ಪತ್ತು ನಾಲ್ಕು ಗಂಟೆ,  ಮೂವತ್ತಾರು ಗಂಟೆ, ಒಮ್ಮೊಮ್ಮೆ ನಲವತ್ತೆಂಟು ಗಂಟೆ ಕೆಲಸ ಮಾಡಿದ್ದು.  ನಿದ್ದೆ ,  ಸರಿಯಾದ ಆಹಾರ, ಸರಿಯಾದ ಭದ್ರತೆ ಇಲ್ಲದೆ ದುಡಿದದ್ದು.  ಎಷ್ಟೋ ಬಾರಿ ಕೆಲಸ ಕಳೆದುಕೊಂಡಿದ್ದು.  ಮನೆಯ ಹಿರಿಯ ಅಣ್ಣ ನ ವಂಚನೆಗೆ ಒಳಗಾಗಿದ್ದು .  ಹೀಗೆ ಅವರ ಜೀವನದ ನೋವಿನ ಸುರುಳಿ ಬಿಚ್ಚುತ್ತಾ ಬಂದು ಅಂತಹ ಒಂದು ಬೃಹದ್ ಆಕಾರದ ಕಂಪನಿಯ ಉದಯಕ್ಕೆ ಕಾರಣ ವಾದದ್ದು ಹೇಳುತ್ತಾ ಬಂದು ಮುಗಿಸಿದರು.  

    ಅವರು ಒಂದನ್ನು ಒತ್ತಿ ಒತ್ತಿ ಹೇಳಿದರು ನಾನು ನವ ಉದ್ದಿಮೆದಾರರಿಗೆ ಹೇಳುವುದೇನೆಂದರೆ ನೀವು ನಿಮ್ಮ ಉದ್ದಿಮೆಗೆ ದುಡಿಯುವ ದುಡಿಮೆವನ್ತರನ್ನು ಕೆಲಸಕ್ಕೆ ಸೇರಿಸಿಕೊಳ್ಳಿ.  ಒಂದು ಕೆಲಸ ಆಗಬೇಕು ಅಂತ ಹೇಳಿ.  ಇದೆ ರೀತಿ ಮಾಡಿ ಎಂದು ಹೇಳಬೇಡಿ.  ಅವನ ಅನುಭವದಿಂದ ಉತ್ತಮ ವಾಗಿಯೇ ಮಾಡುತ್ತಾನೆ.  ಯಾವತ್ತು ಕೆಲಸಕ್ಕೆ ನಿಯಮಿಸಿಕೊಳ್ಳುವಾಗ ಪಕ್ಷ ಭೇದ ಮಾಡಬೇಡಿ.  ಎಲ್ಲಾ ಕಾರ್ಮಿಕರಿಗೂ ಭತ್ಯೆ ಸರಿ ಸಮಾನವಾಗಿ ಕೊಡಿ.  ಹೀಗೆ ಅವರ ಮಾತು ಸಾಗಿತ್ತು.  ಒಬ್ಬ ವ್ಯಕ್ತಿ ಬೀಡಿ, ಸಿಗರೇಟು, ಮಧ್ಯಪಾನ, ದೂಮಪಾನ,ಕೆಟ್ಟ ಚಟ , ಸಿನಿಮಾ ಇವುಗಳಿಗೆ ಪ್ರತಿಯೊಬ್ಬ ವ್ಯಕ್ತಿ ತನ್ನ ದುಡಿಮೆಯ ಸ್ವಲ್ಪ ಹಣವನ್ನು ವಿನಿಯೋಗಿಸುತ್ತಾನೆ.  ಹಾಗೆಯೇ ನಾನು ನನ್ನ ಹಣವನ್ನು ಉತ್ತಮ ಪುಸ್ತಕಗಳಿಗೆ ವಿನಿಯೋಗಿಸಿದೆ. ಆ ಪುಸ್ತಕಗಳು ನನ್ನನ್ನು ಪ್ರಗತಿಯ ಕಡೆ ಉದ್ದಿಮೆ ಕಡೆ ,  ಹಣ ಸಂಪಾದನೆಯ ಕಡೆ ಹೋಗುವಂತೆ ತೋರಿಸಿದವು.  ಹಾಗೆಯೇ ನನ್ನ ಹಣ ಹಣ ಸಂಪಾದನೆಯ ಕಡೆ ಪ್ರಯೋಗಕ್ಕೆ ತೊಡಗಿದೆ.  ಇಂದು ದೊಡ್ಡ ಉದ್ದಿಮೆದಾರ ನಾಗಿದ್ದೇನೆ.  ನನ್ನ ಜತೆಗೆ ಕೆಲಸ ಮಾಡುತ್ತಿದ್ದ ಹಲವಾರು ಜನ ಇಂದಿಗೂ ಅಂದು ಹೇಗೆ ಇದ್ದರೋ ಇಂದು ಹಾಗೆಯೇ ಇದ್ದಾರೆ.  ಎಂದು ತಮ್ಮ ಮಾತು ಮುಗಿಸಿದರು.  ಅಂದರೆ ಅವರ ಪ್ರಕಾರ ನಾವು ಮಾಡುವ ಕೆಲಸದ ಜತೆಯಲ್ಲಿಯೇ ನಮ್ಮ ವಯಕ್ತಿಕ ದುಡಿಮೆಗೆ ಹಣವನ್ನು ಹೂಡಿಕೆಮಾಡಬೇಕು ಎಂದು ಅಲ್ಲವೇ.?




ವಂದನೆಗಳೊಂದಿಗೆ 


ಎ.ಟಿ.ನಾಗರಾಜ